ಕೊಟ್ಟಣದ ಸೋಮವ್ವ ಕೊಟ್ಟಣ ಕುಟ್ಟುವ ಕಾಯಕದವಳು. ಸಾಮಾನ್ಯ ವರ್ಗದ ವ್ರತಾಚಾರ ನಿಷ್ಠೆಯ ಶಿವಶರಣೆ. ಅಪಾರ ಧೈರ್ಯವಂತೆ, ಕಾಯಕದಲ್ಲಿ ಕೈಲಾಸ, ನೆಮ್ಮದಿಯನ್ನು ಕಂಡವಳು. ಈಕೆಯು ತನ್ನ ಕಾಯಕ ದೃಷ್ಟಾಂತ ಬಳಸಿ ತಾನು ಹೇಳಬೇಕಾದುದನ್ನು ಧ್ವನಿಪೂರ್ಣ ವಾಗಿ ಹೇಳಿದ್ದಾಳೆ. ಈಕೆಯ ವಚನಗಳ ಅಂಕಿತ "ನಿರ್ಲಜ್ಜೇಶ್ವರ". ಹೆಚ್ಚಿನ ಮಾಹಿತಿಗೆ ಡಾ. ಕಾವ್ಯಶ್ರೀ ಜಿ ಇವರ "ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ" ಕೃತಿ ಓದಬಹುದು. ಆದಿತ್ಯ ಪ್ರಕಾಶನ, ಚಿತ್ರದುರ್ಗ